ರೋಮಿಯೋಗೆ ವಠಾರದಲ್ಲಿ ಅದ್ದೂರಿ ಸ್ವಾಗತ
Posted date: 12 Mon, Dec 2011 ? 11:10:17 AM

ಕೆ.ಎಸ್.ಪಿಕ್ಚರ್ಸ್ ಲಾಂಛನದಲ್ಲಿ ನವೀನ್(ನಾಯಕ) ಹಾಗೂ ರಮೇಶ್‌ಕುಮಾರ್ ನಿರ್ಮಿಸುತ್ತಿರುವ ‘ರೋಮಿಯೋ ಚಿತ್ರಕ್ಕಾಗಿ ಯೋಗರಾಜ್‌ಭಟ್ ‘ಬೈಟು ಬೆಡ್‌ಶೀಟ್‌ನಲ್ಲಿ ಒಂದೇ ತಲೆದಿಂಬು ಇಟ್ಕೊಂಡು ಸೀಲಿಂಗು ಫ಼್ಯಾನು ನೋಡಿ ಆಮೇಲಿಂದು ಆಮೇಲೆ ಎಂಬ ಗೀತೆಯನ್ನು ಬರೆದಿದ್ದಾರೆ. ಈ ಹಾಡನ್ನು ಹಾಡುವ ಮೂಲಕ ವಠಾರದ ಮಂದಿ ಹೊಸದಾಗಿ ಮದುವೆಯಾಗಿಬಂದ ನಾಯಕ-ನಾಯಕಿಯನ್ನು ಸ್ವಾಗತಿಸುತ್ತಾರೆ. ಗಣೇಶ್, ಭಾವನಾ, ಸುಧಾಬೆಳವಾಡಿ ಮುಂತಾದವರು ಅಭಿನಯಿಸಿದ ಈ ಗೀತೆಯ ಚಿತ್ರೀಕರಣ ಯಶವಂತಪುರದ ಬಳಿ ನಡೆಯಿತು. ಬಾಬಾಭಾಸ್ಕರ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.
      ಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ನಟರಾಜ್ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವೈದಿ ಅವರ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ಗಣೇಶ್, ಭಾವನಾ(ಜಾಕಿ), ಅವಿನಾಶ್, ಸಾಧುಕೋಕಿಲಾ, ರಮೇಶ್‌ಭಟ್, ಮಿತ್ರ ರಂಗಾಯಣ ರಘು, ಸುಧಾಬೆಳವಾಡಿ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed